ಕೋರ್ವಸ್
ಆಕಾಶದ 88  ನಕ್ಷತ್ರ ಪುಂಜಗಳಲ್ಲಿ ಒಂದು.  ವಿಷುವದಂಶ 11ಗಂ.55ಮಿ.-12 ಗಂ.55 ಮಿ. ಮತ್ತು ಘಂಟಾವೃತ್ತಾಂಶ 110-250 ದ. ಕನ್ಯಾರಾಶಿಯ ಪಕ್ಕದಲ್ಲಿದೆ.  ಸಿಂಹ ರಾಶಿಗೂ ಕ್ರಕ್ಸ್ ಪುಂಜಕ್ಕೂ ನಡುವೆ ಇರುವ ನಾಲ್ಕೂ ನಕ್ಷತ್ರಗಳು ರಚಿಸುವ ಚತುರ್ಭಜಾಕೃತಿಯೇ ಕೋರ್ವಸ್ ಪುಂಜ. ಸುಲಭವಾಗಿ ಗುರುತಿಸಬಹುದು. ತೆರೆದಿಟ್ಟ ಅಂಗೈನಂತೆ ಕಾಣುವುದರಿಂದ ಹಸ್ತಾ ಎಂಬ ಹೆಸರಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ